| YouTube Channel

अनिर्वचनीख्याति (anirvacanIkhyAti)

 
Shabdartha Kaustubha
Kannada
अनिर्वचनीख्याति
पदविभागः - > स्त्रीलिङ्गः
कन्नडार्थः - > ಹೇಳಲು ಅಶಕ್ಯವಾದ ವಸ್ತುಗಳ ತೋರಿಕೆ
विस्तारः - > [ಭ್ರಾಂತಿಯಿಂದ ತೋರಿ ಬರುವ ಜಗತ್ತು ಮತ್ತು ಅಜ್ಞಾನಗಳು ಸತ್ತು ಮತ್ತು ಅಸತ್ತುಗಳೆಂದು ಹೇಳಲು ಸಾಧ್ಯವಿಲ್ಲ. “ಸತ್” ಎಂದರೆ ಬ್ರಹ್ಮನಂತೆ ಕಾಲತ್ರಯದಲ್ಲಿಯ್ ಬಾಧೆಯಿಲ್ಲದಿರುವುದು. “ಅಸತ್” ಎಂದರೆ ಎಂದೆಂದಿಗ್ ತೋರದಿರುವುದು. ಪ್ರಪಂಚ ಮತ್ತು ಅಜ್ಞಾನಗಳು ಯಾವಾಗಲೂ ತೋರಿಬರುವುದರಿಂದ “ಅಸತ್” ಎಂದು ಹೇಳಲಾಗುವುದಿಲ್ಲ. ಬಾಧವಿರುವುದರಿಂದ “ಸತ್” ಎಂದೂ ಹೇಳಲಾಗುವುದಿಲ್ಲವಾದ ಕಾರಣ ಜಗತ್ತು ಮತ್ತು ಅಜ್ಞಾನಗಳು ಅನಿರ್ವಚನೀಯಗಳಾಗಿಯೇ ತೋರಿಬರುವುವು. ಇದಕ್ಕೆ ಅನಿರ್ವಚನೀಯ ಖ್ಯಾತಿಯೆಂದು ಹೆಸರು.]