| YouTube Channel

अक्षराभ्यास (akSarAbhyAsa)

 
Shabdartha Kaustubha
Kannada
अक्षराभ्यास
पदविभागः - > पुल्लिङ्गः
कन्नडार्थः - > ಅಕ್ಷರವನ್ನು ಗ್ರಹಿಸುವುದು / ಅಕ್ಷರಸ್ವೀಕಾರ
विस्तारः - > ಮಕ್ಕಳಿಗೆ ಪ್ರಪ್ರಥಮವಾಗಿ ಅಕ್ಷರವನ್ನು ಕಲಿಸುವ ಒಂದು ಕರ್ಮ. ಅಕ್ಷರಾಭ್ಯಾಸವನ್ನು ಮಕ್ಕಳಿಗೆ ಐದನೆಯ ವರ್ಷದಲ್ಲಿ ಮಾಡಿಸಬೇಕು. ಇದಕ್ಕೆ ಉತ್ತರಾಯಣವೂ ದ್ವಿತೀಯಾ, ತೃತೀಯಾ, ಪಂಚಮೀ, ಸಪ್ತಮೀ, ದಶಮೀ, ಏಕಾದಶೀ, ದ್ವಾದಶೀ, ತ್ರಯೋದಶೀ ಮತ್ತು ಪೂರ್ಣಿಮೆಗಳೂ ಸೋಮ, ಬುಧ, ಗುರು ಮತ್ತು ಶುಕ್ರವಾರಗಳೂ ಅಶ್ವಿನಿ, ಪುನರ್ವಸು, ಪುಷ್ಯ ಹಸ್ತ, ಚಿತ್ತೆ, ಸ್ವಾತಿ, ಅನುರಾಧಾ, ಶ್ರವಣ ಮತ್ತು ರೇವತೀ ನಕ್ಷತ್ರಗಳೂ ಪ್ರಶಸ್ತವು. ಗುರು ಶುಕ್ರರು ಅಸ್ತರಾಗದಿರುವಾಗಲೂ ಸೂರ್ಯನು ಚರ ಅಥವಾ ಸ್ಥಿರರಾಶಿಯಲ್ಲಿರುವಾಗಲೂ ಅಷ್ಟಮಶುದ್ಧಿಯಿರುವ ಚರಲಗ್ನದಲ್ಲೂ ಅಕ್ಷರಾಭ್ಯಾಸವನ್ನು ನಡೆಯಿಸಬೇಕು.